Friday, January 6, 2017

ಅವಳೇ ನನ್ನ ಸಂಗಾತಿ....... !!!!

ಗಾಳಿಯೊಡನೆ ಗೆಲ್ಲಲು
ಗುದ್ದಾಡುತ್ತಿರುವ ದೀಪ

ಸೂರ್ಯನ ಕೆಂಗಿರಣಗಳರಗಿಸಿಕೊಂಡ
ಹೆಂಚುಗಳ ಚಾವಡಿಯೊಳಗಿಂದ
ಬಂದೇ ಬಿಟ್ಟಳು....


ನನ್ನ ಕರೆಗೆ ಓಗೊಟ್ಟು
ನವಿಲು ಕರೆದ ಮೋಡದಂತೆ
ಮಾಮಾರವರಸಿ ಬಂದ ಗಿಳಿಹಿಂಡಂತೆ
ಓಡೋಡಿ ಬಂದಳು....

ಕೈಯಲ್ಲಿ ಹಿಡಿದು
ಸೆರಗೊರಗಿದೆದೆಯ ಬಡಿತವ
ಮೃದುವಾದ ಓ ಬಂದೇ...... ಎಂಬ ಪಲ್ಲವಿ
ಆತುರದಿ ಕೆಲಸ ಮುಗಿಸುವ ಸರದೀ

ಹಾ... ಬಂದಳು ತಡವಿದ ಬೈತಲೆ ಗಲ್ಲದಮಸಿ
ಉಸಿರಲಿ ಬಿಸಿ ಒಡಲೆಲ್ಲ ಹಸಿ
"ಹೂಂ....." ಎಂಬಂತೆ ಕಡಲಗಲದ ಕಂಗಳ ಸನ್ನೆ
ನನ್ನ ಕಂಡ ಕೂಡಲೇ ಜಗತ್ತೇ ಮರೆವ ನಾಚಿಕೆ....

ಚಿನ್ನಕ್ಕೇ ಹೊಳಪಾಗಬಹುದಾದ ಗಲ್ಲವ ಮುಚ್ಚಿದ
ಮುಂಗುರುಳೊಳಗಿಂದ ಹುಸಿನೋಟ
ಹೆಬ್ಬೆರಳಿಂದ ಇಳೆಯ ಜೊತೆ ಸರಸವಲ್ಲವದು......

ನನ್ನರಸಿ ನನ್ನ ಕರೆಯುತ್ತಿರುವುದು
ನೆನ್ನೆ ಮುಳುಗಿದ ಸೂರ್ಯನ ಜೊತೆ ಶುರುವಾದ
ನಮ್ಮ ಜೀವನದ ಮೊದಲರಾತ್ರಿ ಇನ್ನಿಲ್ಲದಂತೆ
ಅರಳಿ ಕೆರಳಿ ನಾಚಿಕೆಯ ಉತ್ತುಂಗದೊಡನೆ ಗುದ್ದಾಡಿ

ತಾನೇ ಗೆದ್ದೇನೆಂಬ ಭಯದಲ್ಲಿ ನನ್ನೆದೆಯ ಮೇಲೆ
ಕುಳಿತಂತೆ ಕುಳಿತು , ಸರಕ್ಕನೆ ಮತ್ತೆ ನಾಚಿ,
ಕೆಳಗಿಳಿಯಲೆತ್ನಿಸಿ ಮಲ್ಲಿಗೆಯ೦ಥಾ ಮೃದುವಾದ
ಮಣಿಕಟ್ಟನ್ನು ಎಳೆದು, ನನ್ನಿಂದ ತಪ್ಪಿಸಿಕೊಳ್ಳಲೆತ್ನಿಸಿ
ಅಯ್ಯೋ ......  ಬಿಡಿ ಎಂದು
ಒರೆಗಣ್ಣಿನಿಂದ ಬೇಡವೆಂಬಂತೆ ನೋಡುತ್ತಿದ್ದಳು ........

ಅ ಕ್ಷಣವ ಇಂದು ಅಂಗಳದಲ್ಲಿ ನೆನಪಿಗೆ ತಂದೆ.......

ಕುಳಿತಲ್ಲೇ ನೀರಾಗಿ ಪಕ್ಕದಲ್ಲಿರುವ
ಶಿಲಾಶಾಸನದಂತಿರುವ ನನ್ನೆದೆಯ ಮೇಲೆ
ಒರಗಿ ರೀ ಛೀ....  ನೀವು ತುಂಬಾನೇ
ತುಂಟ ಎಂದವಳು ........ ?
.
.
.
.
.
.
.
ಅವಳೇ ನನ್ನ ಸಂಗಾತಿ....... !!!!

No comments:

Post a Comment