Wednesday, July 25, 2018

ಸ (ಕ )ವಿ .......








ಸ (ಕ )ವಿ ....... 



ನೀನನ್ನ ಬಾಯಿಗೆ
ಸವಿಯಾದರೆ
ನಾನಿನ್ನ ಹೊಗಳುವ
ಕವಿಯಾಗುವೆ .




Saturday, May 26, 2018


ಕೊರಗುವ ಹೆಣ... ? 


ಹೌದು  ಕಣೋ ,

 ನೀನಿಲ್ಲ ,

ನಿನ್ನ ನೆನಪನ್ನ ನೇತಾಕೊಂಡಿದ್ದೀನಿ .

ಅದೂ   ಮಾತಾಡ್ತಾ ಇಲ್ಲಾ.

ನೀ ಬರಲ್ಲ ,

ಬರ್ತಿಯಾ ಅನ್ನೋ  ಆಸೆಗೆ  ಜೋತುಬಿದ್ದೀನಿ .

ಬರಲೇ  ಇಲ್ಲ ,

ಒಳಗೆ ಇದಿಯೋ ಇಲ್ವೋ,

ಗೊತ್ತಿಲ್ಲ,

ಕಣ್ಣೀರಲ್ಲಿ ಮಾತ್ರ  ಕರಗೋಗ್ತಾಯಿಲ್ಲ ...!

Thursday, November 30, 2017

   ನನ್ನದೇ ...!



                                ದೋಣಿ  ನೀನಾದಾಗ  ದಡ  
                                ನಾನಾಗಬಯಸುವೆ  ನಿನ್ನೆಲ್ಲ ಹರಿವು 
                                ಮುಗಿದ ಮೇಲೆ  ನನ್ನೇ  ಸೇರುವೆ 
                                ನನ್ನಲ್ಲೇ ಹರಿವು ನಿನ್ನೆಲ್ಲ ಸಕಲವು ...!


ಸತ್ಯ. 


ಅಲೆ ಯಂತೆ  ಎದ್ದೊಡಿದೆ ಬಿಟ್ಟು ನನ್ನ
ಆದರೆ ಸಾಗರದ ನೀರಷ್ಟೇ ಅಲ್ಲ  ದಡವೂ ನಾನೇ 
 ನನ್ನ ಸೇರುವುದೇ ನಿನ್ನ ಜೀವನ . 

ಚುಟುಕು 


ಡುಂಡಿರಾಜ  ಪದಗಳ ಹಿಡಿದು

ಬಲವಂತವಾಗಿ ಬೆಸುಗೆ ಹಾಕುವ ಕೊಂಡಿರಾಜ.