Hutchu
Saturday, May 26, 2018
ಕೊರಗುವ ಹೆಣ... ?
ಹೌದು ಕಣೋ ,
ನೀನಿಲ್ಲ ,
ನಿನ್ನ ನೆನಪನ್ನ ನೇತಾಕೊಂಡಿದ್ದೀನಿ .
ಅದೂ ಮಾತಾಡ್ತಾ ಇಲ್ಲಾ.
ನೀ ಬರಲ್ಲ ,
ಬರ್ತಿಯಾ ಅನ್ನೋ ಆಸೆಗೆ ಜೋತುಬಿದ್ದೀನಿ .
ಬರಲೇ ಇಲ್ಲ ,
ಒಳಗೆ ಇದಿಯೋ ಇಲ್ವೋ,
ಗೊತ್ತಿಲ್ಲ,
ಕಣ್ಣೀರಲ್ಲಿ ಮಾತ್ರ ಕರಗೋಗ್ತಾಯಿಲ್ಲ ...!
Thursday, November 30, 2017
ನನ್ನದೇ ...!
ದೋಣಿ ನೀನಾದಾಗ ದಡ
ನಾನಾಗಬಯಸುವೆ ನಿನ್ನೆಲ್ಲ ಹರಿವು
ಮುಗಿದ ಮೇಲೆ ನನ್ನೇ ಸೇರುವೆ
ನನ್ನಲ್ಲೇ ಹರಿವು ನಿನ್ನೆಲ್ಲ ಸಕಲವು ...!
ಸತ್ಯ.
ಅಲೆ ಯಂತೆ ಎದ್ದೊಡಿದೆ ಬಿಟ್ಟು ನನ್ನ
ಆದರೆ ಸಾಗರದ ನೀರಷ್ಟೇ ಅಲ್ಲ ದಡವೂ ನಾನೇ
ನನ್ನ ಸೇರುವುದೇ ನಿನ್ನ ಜೀವನ .
ಚುಟುಕು
ಡುಂಡಿರಾಜ ಪದಗಳ ಹಿಡಿದು
ಬಲವಂತವಾಗಿ ಬೆಸುಗೆ ಹಾಕುವ ಕೊಂಡಿರಾಜ.
ಸೃಷ್ಠಿ
ಗಾಳಿಯ ಜೊತೆ ಗಂಧ ಸೇರಿ ಸೋಬಾನೆ,
ಆ ರಭಸಕೆ ಜನಿಸಿದ ಅಮೃತ ಬಿಂದು ನೀನೇನೇ ???
Monday, April 17, 2017
ನನಗಾಗಿ ನೀ
ನನಗಾಗಿ ನೀ
ದೋಣಿ ನೀನಾದೊ ಡೆ ದಡ
ನಾನಾಗಬಯಸುವೆ ,,
ನಿನ್ನೆಲ್ಲಾ
ಹರಿವು ಮುಗಿದಮೇಲೆ ಸೇರಲೇ
ಬೇಕು ನನ್ನ,,,,
ನನ್ನಾಂತರ್ಯದಲ್ಲಿ
ಮಾತ್ರವೇ ನಿನ್ನ ಹೆಜ್ಜೆ ಸಪ್ಪಳ ,,,
ನಾನಿಲ್ಲದ ನಿನ್ನಿರುವಿಕೆ ವ್ಯರ್ಥ
ಕೂಡಲೇಬೇಕೆನ್ನ ನೀ ,,
ಅದೇ ಸೃಷ್ಟಿಯ ಅರ್ಥ .........
Saturday, February 4, 2017
ಹೆಣ್ಣು
ಹೆಣ್ಣು
ಕವನದ ಬಿಂಕ ನೀನು
ಸಾಲಿಗೆ ಸುಂಕ ನೀನು
ಅರ್ಥದ ಗರ್ಭ ನೀನು
ಸೊಗಸಿಗೆ ಸ್ಪರ್ಧೆ ನೀನು
ಅಂದಕೆ ಬಂಧು ನೀನು
ಮೋಹಕೆ ಸಿಂಧು ನೀನು
ಅಧರದ ನುಣಪು ನೀನು
ಮಿಂಚಿಗೆ ಹೊಳಪು ನೀನು
ಲಜ್ಜೆಯ ಚಿಗುರು ನೀನು
ಯವ್ವನಕೆ ಪೊಗರು ನೀನು
ಹೆಣ್ತನಕೆ ಉಸಿರು ನೀನು
ತಾಯ್ತನಕೆ ಹಸಿರು ನೀನು
ಜೀವದಲಿ ಬೆರೆಯುವೆ ನೀನು
ಭವದಲಿ ಹರಿವುವೆ ನೀನು ......!!
Newer Posts
Older Posts
Home
Subscribe to:
Posts (Atom)